GOOD NEWS: 10 ಸಾವಿರಕ್ಕೂ ಕಮ್ಮಿ ಬೆಲೆಗೆ iPhone ಖರೀದಿಸುವ ಸುವರ್ಣಾವಕಾಶ, ವಿವರಗಳಿಗಾಗಿ ಸುದ್ದಿ ಓದಿ

iPhone SE ಮೇಲೆ ಇದುವರೆಗಿನ ಅತ್ಯಂತ ದೊಡ್ಡ ಡಿಸ್ಕೌಂಟ್ ನೀಡಲಾಗುತ್ತಿದೆ, ಈ ಫೋನ್ ಮೇಲೆ ಎಕ್ಸ್ ಚೇಂಜ್ ಹಾಗೂ ಡಿಸ್ಕೌಂಟ್ ಕೊಡುಗೆ ನೀಡಲಾಗುತ್ತಿದೆ. ಇದರ ಅಡಿ ನೀವು iPhone ಅನ್ನು 10 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದು.

Written by - Nitin Tabib | Last Updated : Oct 2, 2021, 10:48 AM IST
  • iPhone SE ಮೇಲೆ ಇದುವರೆಗಿನ ಅತಿ ದೊಡ್ಡ ಡಿಸ್ಕೌಂಟ್
  • ಈ ಫೋನ್ ಮೇಲೆ ಎಕ್ಸ್ ಚೇಂಜ್ ಕೊಡುಗೆ ಹಾಗೂ ಡಿಸ್ಕೌಂಟ್ ಸಿಗುತ್ತಿದೆ.
  • ಈ ಫೋನ್ ಅನ್ನು ನೀವು 10 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದು.
GOOD NEWS: 10 ಸಾವಿರಕ್ಕೂ ಕಮ್ಮಿ ಬೆಲೆಗೆ iPhone ಖರೀದಿಸುವ ಸುವರ್ಣಾವಕಾಶ, ವಿವರಗಳಿಗಾಗಿ ಸುದ್ದಿ ಓದಿ title=
iPhone Offer (File Photo)

ನವದೆಹಲಿ: iPhone SE ಬೆಲೆ ಐತಿಹಾಸಿಕ ಕೆಳಮಟ್ಟಕ್ಕೆ ಇಳಿದಿದೆ. ಹೌದು, ತಾಂತ್ರಿಕ ರೂಪದಲ್ಲಿ iPhone SE ಮೇಲಿನ ರಿಯಾಯಿತಿ ಈ ಫೋನ್ ಅನ್ನು 10 ಸಾವಿರಕ್ಕೂ ಕಡಿಮೆ ಬೆಲೆಯ ಬಜೆಟ್ ಸ್ಮಾರ್ಟ್ ಫೋನ್ ರೂಪದಲ್ಲಿ ಅರ್ಹತೆಯನ್ನು ನೀಡುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದು. 2020 ರಲ್ಲಿ ಬಿಡುಗಡೆಯಾದ ಹೊಚ್ಚಹೊಸ ಐಫೋನ್ ಅನ್ನು ಎಂಟ್ರಿ ಲೆವೆಲ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಬೆಲೆಗೆ ಪಡೆಯಬಹುದು. ಐಫೋನ್ ಎಸ್ಇ ಕನಿಷ್ಠ ನಾಲ್ಕು ವರ್ಷಗಳ ಓಎಸ್ ಅಪ್‌ಡೇಟ್‌ಗಳು ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ ಎಸ್‌ಇ ಅನ್ನು ಅಗ್ಗದ ದರದಲ್ಲಿ ಖರೀದಿಸಬಹುದು. ಈ ಫೋನಿನ ವಿನ್ಯಾಸ 6 ವರ್ಷ ಹಳೆಯದು ಮತ್ತು ಸಣ್ಣ ಬ್ಯಾಟರಿಯನ್ನು ಹೊಂದಿದೆ.

iPhone SE, Flipkart ನಲ್ಲಿ ಒಂದು ಬಜೆಟ್ ಅಂಡ್ರಾಯಿಡ್ ಫೋನ್ ದರದಲ್ಲಿ ಲಭ್ಯವಿದೆ
iPhone SE ಇದೀಗ ಎಲ್ಲರಿಗಾಗಿ ರೂ. 25,999 ರ ದಿಯಾಯಿತಿ ದರದಲ್ಲಿ ಲಭ್ಯವಿದೆ. ಹಾಗೆ ನೋಡಿದರೆ ಈ ಫೋನ್ ನ 64 GB ರೂಪಾಂತರಿ ಬೆಲೆ ರೂ 32,999 ಆಗಿದೆ. ಒಂದು ವೇಳೆ ನೀವು ICICI ಬ್ಯಾಂಕ್ ಹಾಗೂ Axis ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಪಾವತಿಸಿದರೆ, ಇದರ ಮೇಲೆ ನೀವು ರೂ.15,000 ವರೆಗೆ ರಿಯಾಯಿತಿ ಪಡೆಯಬಹುದು. ಈ ರಿಯಾಯಿತಿ ಈ ಫೋನ್ ಬೆಲೆಯನ್ನು ರೂ.24,499ಕ್ಕೆ ತಂದು ನಿಲ್ಲಿಸುತ್ತದೆ.

ಇದನ್ನೂ ಓದಿ-Amazon-Flipkart ನಲ್ಲಿ ಶಾಪಿಂಗ್ ಮಾಡುವಾಗ ನೆನಪಿರಲಿ ಈ 4 ವಿಷಯಗಳು : ಇಲ್ಲದಿದ್ದರೆ ತಪ್ಪಿದಲ್ಲ ಅಪಾಯ!

ಇದರ ಬೆಲೆಯನ್ನು ನೀವು ಇನ್ನೂ ಕಡಿಮೆಯಾಗಿಸಬಹುದು. ಏಕೆಂದರೆ ಫ್ಲಿಪ್ ಕಾರ್ಟ್ ಇದರ ಮೇಲೆ ಎಕ್ಸ್ ಚೇಂಜ್ ಆಫಾತ್ ಕೂಡ ನೀಡುತ್ತಿದೆ. ಯೋಗ್ಯವಾದ ಫೋನ್ ವೊಂದನ್ನು ನೀಡಿ ನೀವು ಮತ್ತೆ 15,000 ವರೆಗೆ ಡಿಸ್ಕೌಂಟ್ ಪಡೆಯಬಹುದು ಎಂದು ಫ್ಲಿಪ್ ಕಾರ್ಟ್ ಹೇಳಿದೆ. ಎಕ್ಸ್ ಚೇಂಜ್ ಆಫರ್ ಅಡಿ iPhone XR ನೀವು ನೀಡಿದರೆ, ನಿಮಗೆ ಮತ್ತೆ 15 ಸಾವಿರ ರೂ.ಗಳ ಡಿಸ್ಕೌಂಟ್ ಸಿಗುತ್ತದೆ. 

ಇದನ್ನೂ ಓದಿ-WhatsApp: ಆಗಸ್ಟ್ ತಿಂಗಳಲ್ಲಿ ಭಾರತದಲ್ಲಿ 20.7 ಲಕ್ಷ ಖಾತೆಗಳನ್ನು ನಿಷೇಧಿಸಿದ ವಾಟ್ಸಪ್

ಈ ಎಕ್ಸ್ ಚೇಂಜ್ ಬಳಿಕ iPhone ಬೆಲೆ ರೂ.9,499 ಆಗಲಿದೆ. ಅಂದರೆ ನಿಮಗೆ iPhone ಅಗ್ಗದ ಬೆಲೆಗೆ ಸಿಗಲಿದ್ದು ನೀವೂ ಕೂಡ ಇದನ್ನು ಅಗ್ಗದ ಬೆಲೆಗೆ ಖರೀದಿಸಬಹುದು.

ಇದನ್ನೂ ಓದಿ-ಸ್ಟ್ರಾಂಗ್ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ 4 ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo, ಬೆಲೆ ಮತ್ತು ಇತರ ಫೀಚರ್ ಗಳನ್ನು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News